About Us
Mindbody Cold Laser Center established in Bengaluru with very well experienced doctors and specialists with thorough knowledge on the subject. Cold laser therapy is an advanced technology popular mostly in Canada and the USA with other countries. It’s a no medicine painless treatment where people would be get relived from all musculoskeletal pains in a few sessions.
Specialists Available
Dr Sadanand KC
Psychologist and Cold laser specialist
Dr Rahula Kadirappa
Physician
Dr Harish
Physiotherapist and Cold laser specialist
Frequently Asked Questions
ಸಸ್ಯಗಳು ಹಾಗೂ ಕೆಲವು ಜೀವಿಗಳು ಬೆಳಕನ್ನು ಬಳಸಿಕೊಂಡು ಅಗತ್ಯ ಶಕ್ತಿಯನ್ನಾಗಿ ಪರಿವರ್ತಿಸಿಕೊಳ್ಳುವ ದ್ಯುತಿ ಸಂಶ್ಲೇಷಣಾ ಕ್ರಿಯೆಯಂತೆ, ನಿಷ್ಕ್ರಿಯಗೊಂಡ ದೇಹದ ಭಾಗಗಳಿಗೆ ಪೂರಕ ಬೆಳಕಿನ ಅಲೆಗಳನ್ನು ಹರಿಸಿ, ಜೀವಕೊಶಗಳಿಗೆ ಜೀವ ತುಂಬುವ ಚಿಕಿತ್ಸಾ ವಿಧಾನವೇ ಕೋಲ್ಡ್ ಲೇಸರ್ ಥೆರಪಿ.
– ಡಾ.ಕೆ.ಸಿ.ಸದಾನಂದ ರಾವ್
ಈ ಯಾಂತ್ರಿಕ ಬದುಕು ಅನೇಕ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ತಂದೊಡ್ಡಿದೆ. ಕಲುಷಿತ ಆಹಾರ, ನೀರು ಸೇವನೆಯೊಂದಿಗೆ ಜೀವನ ಜಂಜಾಟದ ಒತ್ತಡಗಳು ದೈಹಿಕ, ಮಾನಸಿಕ ಸಮಸ್ಯೆಗಳಿಗೂ ಕಾರಣವಾಗಿ ಅನೇಕ ಔಷಧಿಗಳನ್ನು ನುಂಗುವಂತೆ ಮಾಡುತ್ತದೆ. ಔಷಧ ಸೇವಿಸದೇ ಅಡ್ಡ ಪರಿಣಾಮವಿಲ್ಲದೇ, ಕಾಯಿಲೆ ವಾಸಿಯಾಗುವಂತಿದ್ದರೆ, ಅದೇ ಅಚ್ಚರಿ. ಕೋಲ್ಡ್ ಲೇಸರ್ ಎಂಬ ಚಿಕಿತ್ಸಾ ವಿಧಾನ ಅಡ್ಡ ಪರಿಣಾಮವಿಲ್ಲದೇ ಮಾನಸಿಕ ಒತ್ತಡ ಸೇರಿದಂತೆ ಕೆಲವು ಸಮಸ್ಯೆಗಳಿಗೆ ರಾಮಬಾಣವಾಗಿದೆ.
ದೇಹದ ಯಾವ ಭಾಗದಲ್ಲಿ ನೋವಿನ ಅನುಭವ ಆಗುತ್ತಿದೆಯೋ, ಅಲ್ಲಿ ಕೆಂಪು ಬೆಳಕಿನ ಲೇಸರ್ ಅಲೆಗಳನ್ನು ಹರಿಸಲಾಗುತ್ತದೆ. ಚರ್ಮದ ಡರ್ಮಿಸ್, ಎಪಿಡರ್ಮಿಸ್, ಸಬ್‌ಕ್ಯೂಟೇನಿಯಸ್ ಜಾಗದಲ್ಲಿ ಸುಮಾರು ನಾಲ್ಕರಿಂದ ಐದು ಇಂಚುಗಳವರೆಗೆ ಒಳ ಹೊಕ್ಕು, ಮೈಟೋ ಕಾಂಡ್ರೀಯಾದಲ್ಲಿ ಅಡಿನೋಸೆಂಟ್ ಟ್ರೈ ಪಾಸ್ಫೇಟ್ ಎಂಬ ರಾಸಾಯನಿಕರ ಉತ್ಪತ್ತಿಗೆ ಕಾರಣವಾಗುವ ಈ ಬೆಳಕಿನ ಅಲೆಗಳಿಂದ ರಕ್ತ ಸಂಚಾರ ಸುಗಮವಾಗುತ್ತದೆ. ಆಗ ಆ ಜಾಗಕ್ಕೆ ಆಮ್ಲಜನಕವೂ ಸುಸೂತ್ರವಾಗಿ ಪೂರೈಕೆಯಾಗುತ್ತದೆ. ವಿಟಮಿನ್, ಕ್ಯಾಲ್ಸಿಯಂ ಹಾಗೂ ಅಗತ್ಯ ಜೀವ ಸತ್ವಗಳು ಹೆಚ್ಚು ಪೂರೈಕೆಯಾಗುವಂತೆ ಈ ಬೆಳಕಿನಲ್ಲಿರುವ ಲೇಸರ್ ಫೋಟಾನ್ಸ್ ಸಹಕರಿಸುತ್ತದೆ.
ಗಾಯ ವಾಸಿಯಾಗಲು ಅಗತ್ಯವಾದ ಫ್ರೈಬ್ರಾಬ್ಲಾಸ್ಟ್ ಅನ್ನು ಲೇಸರ್ ಬೆಳಕಿನಲ್ಲಿರುವ ಫೋಟಾನ್ಸ್ ಉತ್ಫಾದಿಸುತ್ತದೆ. ಎರಡು ಮೂಳೆಗಳ ಮದ್ಯಕ್ಕೆ ಈ ಬೆಳಕಿನ ಅಲೆಗಳನ್ನು ಹರಿಸಿದರೆ, ಮೂಳೆ ಸವೆತದಿಂದ ಆಗಿರುವ ಊತ ತಗ್ಗಿ, ಮೂಳೆಗಳು ಸದೃಢಗೊಳ್ಳುತ್ತದೆ. ಅಗತ್ಯವಿರುವ ದೇಹದ ಜಾಗದಲ್ಲಿ ಈ ಲೇಸರ್ ಹರಿಸಿದಾಗ ರಕ್ತ ಸಂಚಾರ ಸರಾಗವಾಗುತ್ತದೆ. ಸುಟ್ಟ ಗಾಯ, ಶಸ್ತ್ರ ಚಿಕಿತ್ಸೆಯಿಂದಾದ ಗಾಯಗಳ ಮೇಲೆ ಕೃಶ ಜೀವಕೋಶಗಳು ಬೆಳೆಯುವುದನ್ನು ಈ ಲೇಸರ್ ಬೆಳಕು ಕುಂಠಿತ ಗೊಳಿಸಬಲ್ಲದು. ಅಗತ್ಯವಿರುವೆಡೆ ಸೂಕ್ತವಾದ ರಕ್ತ ಸಂಚಾರವಾಗುವುದರಿಂದ ಈ ಜಾಗದ ಜೋಮು ಕಡಿಮೆಯಾಗಿ, ಸಂವೇದನೆಯನ್ನು ಹೆಚ್ಚಿಸುತ್ತದೆ. ಮೆದುಳಿನ ಡೊಪಾಮಿನ್, ಸೆರೆಟೋನಿನ್ ಹಾಗೂ ಎಂಡಾರ್ಫಿನ್ ಅನ್ನು ಈ ಅಲೆಗಳು ಸುಸ್ಥಿತಿಗೆ ತರುವುದರಿಂದ ದುಶ್ಚಟಗಳು ಹಾಗೂ ಸಾಮಾನ್ಯ ಮಾನಸಿಕ ಸಮಸ್ಯೆಗಳಿಗೂ ಉತ್ತಮ ಪರಿಹಾರವಾಗಬಲ್ಲದು.
‘ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು, ಊರೆಲ್ಲಾ ತುಪ್ಪಕ್ಕೆ ಹುಡುಕಿದರು’ ಎಂಬಂತೆ, ಸುಲಭ ಹಾಗೂ ಸರಳವಾದ, ಯಾವುದೇ ಅಡ್ಡ ಪರಿಣಾಮವಿಲ್ಲದ, ಯಾವುದೇ ಔಷಧಿಗಳಿಲ್ಲದ ಈ ಚಿಕಿತ್ಸೆ ಯಾರು ಬೇಕಾದರೂ ತೆಗೆದುಕೊಳ್ಳಬಹುದು.
ಮೂಳೆಗಳ ಸವೆತ, ಮಧುಮೇಹ, ನರರೋಗ, ಸೊಂಟ ನೋವು, ಬೆನ್ನೆಲುಬಿನ ಊರಿಯೂತ, ಕತ್ತು ನೋವು, ಬೆನ್ನು ಹುರಿ ಸವೆತ, ಭುಜದ ನೋವು, ಮಂಡಿ ನೋವು, ಅರೆ ತಲೆ ನೋವು, ಸೈನಸ್, ಹಿಪ್ ಜಾಯಿಂಟ್ ಪೈನ್, ಪಾದದ ಉರಿ ಮತ್ತು ಜೋಮು ಸೇರಿ ಎಲ್ಲಾ ಬಗೆಯ ಜಾಯಿಂಟ್ ನೋವುಗಳಿಗೆ ಇದು ರಾಮಬಾಣ. ಸೋರಿಯಾಸಿಸ್‌ನಂಥ ಚರ್ಮ ರೋಗಗಳು, ಮಾನಸಿಕ ಸಮಸ್ಯೆಗಳಾದ ಒತ್ತಡ, ಆಂತಕ ಖಿನ್ನತೆ, ನಿದ್ರಾ ಹೀನತೆ, ಮಾನಸಿಕ ಒತ್ತಡ, ಮಾದಕ ವ್ಯಸನಕ್ಕೆ ಲೇಸರ್ ಪರಿಣಾಮಕಾರಿ.